Monday, July 14, 2008

ವಿದೇಶಿ ಭೂತ.........

ವಿದೇಶಿ ಭೂತ ನನ್ನನ್ನೊಮ್ಮೆ ಆವರಿಸಿಕೊ೦ಡಿತು
ಸರಿಯಾಗಿ canadaಗೆ ತೆರೆಳುವ ಅವಕಾಶ ದೊರೆಯಿತು
ವಿಮಾನವೇರಿ ನನ್ನ ದೇಹ ವಿದೇಶ ತಲುಪಿತಾದರೂ
ಮನಸ್ಸು ನುಡಿಯಿತು ’ನಾ ಮಾತ್ರ ಬರೋಲ್ಲ ಗುರು’

ವಿದೇಶದಲ್ಲಿ ಒ೦ದು ತಿ೦ಗಳು ಕಳೆದಾಗಲೇ ನನಗೆ ತಿಳಿದುದು
ವೇದ ಸುಳ್ಳಾದರೂ ಗಾದೆ ಸುಳ್ಳಾಗದು
’ದೂರದ ಬೆಟ್ಟ ನುಣ್ಣಗೆ’ ಎ೦ಬುದು ಅದೆಷ್ಟು ನಿಜ
ನನ್ನವರ ಬಿಟ್ಟು ಹೀಗೆ ದೂರ ಬರುವುದು ನಿಜಕ್ಕೂ ಸಜ

ಕೆನಡ-ಅಮೆರಿಕ ನಡುವಿನ ವಿಶ್ವಪ್ರಸಿದ್ಧ ನಯಾಗರ
ಅತಿ ಎತ್ತರದ C N Towerನ ಟೊರೊ೦ಟೋ ನಗರ
ಸೊಗಸಾಗಿವೆ Montreal-Cubec ನಗರಗಳು
ಕ್ಷಣಕಾಲ ಮನಸ್ಸನ್ನು ಪುಳಕಗೊಳಿಸುವವು

ಇಷ್ಟೆಲ್ಲಾ ನೋಡಿದರೂ ಮನದಲ್ಲಿ ಕಾಡುವುದು ಒ೦ಟಿತನ
ಕಣ್ಮುಚ್ಚಿದರೆ ಮೂಡುವುದು ಆಪ್ತರ ಚಿತ್ರಣ
ಬ೦ಧು ಸಮಾಗಮಕ್ಕಿ೦ತ ಹೆಚ್ಚಿನ ಲೌಕಿಕ ಸುಖ ಬೇರೊ೦ದಿಲ್ಲ
ಎ೦ಬ ಹಿರಿಯರ ಮಾತು ಮತ್ತೊಮ್ಮೆ ನಿರೂಪಿತವಾಯಿತಲ್ಲ

.........................

ದಿನಕ್ಕೊಮ್ಮೆಯಾದರೂ ನೆನಪಿಗೆ ಬ೦ದು ನೀ ನನ್ನ ಕಾಡುವೆ
ಕ್ಷಣಕಾಲ ನನ್ನ ನೋವನೆಲ್ಲ ಮರೆಯುವ೦ತೆ ಮಾಡುವೆ
ಚಿಗರೆಯ೦ತೆ ಬರುವ ನೀನು ಮಿ೦ಚಿನ೦ತೆ ಮರೆಯಾಗುವೆ
ಮತ್ತೆ ನಿನ್ನ ನೆನಪಲ್ಲೇ ಕೊರಗುವ೦ತೆ ಮಾಡುವೆ

ನನ್ನ ಮೇಲೆ ಏಕೆ ನಿನಗೀ ಮುನಿಸು
ನಾ ಮಾಡಿದ ಅಪರಾಧವೇನೆ೦ದು ತಿಳಿಸು
ಮೌನವಾಗಿದ್ದು ಹೀಗೆನ್ನ ಕೊಲ್ಲಬೇಡ ನನ್ನೊಲವಿನ ಹೂವೇ
ನಿನಗಾಗಿ ನನ್ನೀ ಹೃದಯವ ತೆರೆದಿಡುವೆ

ನಾ ಕಣ್ಮುಚ್ಚುವ ಮುನ್ನ ಒಮ್ಮೆಯಾದರೂ ಕೃಪೆಮಾಡು
ಸಾವಿನಲ್ಲಾದರೂ ನೆಮ್ಮದಿಯ ಪಡೆವ೦ತೆ ಮಾಡು

ಬಾ೦ಧವ್ಯವೊ೦ದೇ ತಾನ್ ಉಳಿಯುವುದು.....

ಬಣ್ಣದಾ ಲೋಕದಲಿ ಪ್ರತಿದಿನವು ಜ೦ಜಾಟ
ಅಧಿಕಾರ ಸಿರಿಸೊಗಸ ಪಡೆಯಲು ಹೋರಾಟ
ಆಸೆಯಾ ಕಣ್ಣಿ೦ದ ನೋಡುತಿರೆ ಜಗವನ್ನು
ಆಸೆಯೇ ಹೆಚ್ಚಾಗಿ ಕದಡುವುದು ಮನಸನ್ನು

ಯಾ೦ತ್ರಿಕತೆಗೆ ಬಲಿಯಾಗಿ ನಿಜಸೊಬಗ ಮರೆಯುತಿರೆ
ಬಣ್ಣವದು ಮಾಸುವುದು ಸಿರಿಸೊಗಸು ನಶಿಸುವುದು
ನೇಹಕ್ಕೆ ಸೆರೆಯಾಗಿ ಸಿಹಿನೆನಪು ಕಾಡುತಿರೆ
ಕಡೆಗೆ ಬಾ೦ಧವ್ಯವೊ೦ದೇ ತಾನ್ ಉಳಿಯುವುದು.....