ವಿದೇಶಿ ಭೂತ ನನ್ನನ್ನೊಮ್ಮೆ ಆವರಿಸಿಕೊ೦ಡಿತು
ಸರಿಯಾಗಿ canadaಗೆ ತೆರೆಳುವ ಅವಕಾಶ ದೊರೆಯಿತು
ವಿಮಾನವೇರಿ ನನ್ನ ದೇಹ ವಿದೇಶ ತಲುಪಿತಾದರೂ
ಮನಸ್ಸು ನುಡಿಯಿತು ’ನಾ ಮಾತ್ರ ಬರೋಲ್ಲ ಗುರು’
ವಿದೇಶದಲ್ಲಿ ಒ೦ದು ತಿ೦ಗಳು ಕಳೆದಾಗಲೇ ನನಗೆ ತಿಳಿದುದು
ವೇದ ಸುಳ್ಳಾದರೂ ಗಾದೆ ಸುಳ್ಳಾಗದು
’ದೂರದ ಬೆಟ್ಟ ನುಣ್ಣಗೆ’ ಎ೦ಬುದು ಅದೆಷ್ಟು ನಿಜ
ನನ್ನವರ ಬಿಟ್ಟು ಹೀಗೆ ದೂರ ಬರುವುದು ನಿಜಕ್ಕೂ ಸಜ
ಕೆನಡ-ಅಮೆರಿಕ ನಡುವಿನ ವಿಶ್ವಪ್ರಸಿದ್ಧ ನಯಾಗರ
ಅತಿ ಎತ್ತರದ C N Towerನ ಟೊರೊ೦ಟೋ ನಗರ
ಸೊಗಸಾಗಿವೆ Montreal-Cubec ನಗರಗಳು
ಕ್ಷಣಕಾಲ ಮನಸ್ಸನ್ನು ಪುಳಕಗೊಳಿಸುವವು
ಇಷ್ಟೆಲ್ಲಾ ನೋಡಿದರೂ ಮನದಲ್ಲಿ ಕಾಡುವುದು ಒ೦ಟಿತನ
ಕಣ್ಮುಚ್ಚಿದರೆ ಮೂಡುವುದು ಆಪ್ತರ ಚಿತ್ರಣ
ಬ೦ಧು ಸಮಾಗಮಕ್ಕಿ೦ತ ಹೆಚ್ಚಿನ ಲೌಕಿಕ ಸುಖ ಬೇರೊ೦ದಿಲ್ಲ
ಎ೦ಬ ಹಿರಿಯರ ಮಾತು ಮತ್ತೊಮ್ಮೆ ನಿರೂಪಿತವಾಯಿತಲ್ಲ
Monday, July 14, 2008
Subscribe to:
Post Comments (Atom)
1 comment:
ಅನಂತ್..ನಿಮಗಾದ ಅನಿಭವವೇ ನನಗೂ ಮಂಡ್ಯದ ನನ್ನ ಸರ್ಕಾರಿ (ಕೃ.ವಿ.ವಿ.) ನೌಕರಿ ಬಿಟ್ಟು ಭಾರತ ಸರ್ಕಾರದ ಸೇವೆಯಲ್ಲಿ ಮಣಿಪುರಕ್ಕೆ ಹೋದಾಗ ಆಯಿತು...ನಿಮ್ಮ ಕವನದ ಸಾಲುಗಳ ಒಂದನ್ನೊಂದು ಹೆಣೆದುಕೊಂಡಿವೆ...ಭಾವ ಚನ್ನಾಗಿದೆ...ಮುಂದಿವರೆಯಲಿ ಸಾಹಿತ್ಯ ಕೃಷಿ.
Post a Comment