ನನ್ನೊಲವಿನಾ ಹೂವೇ
ನೀ ನಡೆದು ಬಾ ನನ್ನೆಡೆಗೆ
ನಿನಗಾಗಿ ನನ್ನೀ ಹೃದಯವ ತೆರೆದಿಡುವೆ
ನೀ ಲೇಖನಿಯಾಗು ನನ್ನ ಬಾಳ ಮುನ್ನುಡಿಗೆ
ಮನದಾಳದ ಭಾವವಿದು ನೀ ಕೇಳು ಗೆಳತಿ
ಮನವೆ೦ಬ ಅರಮನೆಗೆ ನೀನಾಗಿಹೆ ಒಡತಿ
ದೀನನಾಗಿ ನಿ೦ತಿಹೆ ಪ್ರೇಮ ಭಿಕ್ಷೆಯ ಬೇಡಿ
ನಿನ್ನ ಸನಿಹವ ಬೇಡಿದೆ ನನ್ನೆಲ್ಲ ನರ ನಾಡಿ
ಕೇಳಲಾರೆ ಬೇರೇನೂ ನಿನ್ನ ಸ್ನೇಹವ ಹೊರತು
ಇರಲಾರೆ ಎ೦ದಿಗೂ ನಾನಿನ್ನ ಮರೆತು
ಪ್ರೇಮದಾ ಅಮೃತವ ನೀಡು ಬಾ ಚ೦ದ್ರಮುಖಿ
ನನ್ನೀ ಬಾಳ ಬೆಳಗಲು ಒಲಿದು ಬಾ ಪ್ರಾಣಸಖಿ