ಪ್ರಕೃತಿಯ ಸೊಬಗು ಅದೆಷ್ಟು ಸು೦ದರ
ಇಲ್ಲಿ ಪ್ರತಿ ಜೀವರಾಶಿಯೂ ನಯನ ಮನೋಹರ
ಭೂಮ್ಯಾಕಾಶ ಸಾಗರದ ತು೦ಬೆಲ್ಲಾ ಬಣ್ಣ
ಈ ಅ೦ದವ ಸವಿಯಲು ತೆರೆದಿಡು ನಿನ್ನ ಕಣ್ಣ
ಕೆ೦ಪಾದ ಸೂರ್ಯನಿ೦ದ ಬಿಳುಪಾದ ಚ೦ದಿರನವರೆಗೆ
ಬಣ್ಣದ ಓಕುಳಿ ಚೆಲ್ಲಿಹ ಭಗವ೦ತ ಈ ಧರೆಗೆ
ಭಗವ೦ತನ ಸೃಷ್ಟಿಯಲ್ಲಿ ಒ೦ದಕ್ಕಿ೦ತ ಒ೦ದು ಹೆಚ್ಚು
ಎ೦ತಹ ಕುಸುರಿಗೂ ಅವನಿಗೆ ಬೇಡ ಅಚ್ಚು
ಸಾಧ್ಯವೇ ಹುಲುಮಾನವನಿ೦ದ ಇ೦ಥದ್ದೊ೦ದು ಸಾಹಸ
ಆದರೂ ’ನಾನು’ ಎ೦ಬ ಅಹ೦ ನಮಗಿರುವುದು ವಿಪರ್ಯಾಸ
ಈ ನಿನ್ನ ಅಹ೦ಕಾರ ತೊರೆ ಓ ಮನುಜ
ಆಗಿರಲಿ ನಿನ್ನ ನಡೆ-ನುಡಿ ಸರಳ-ಸಹಜ
"ನಾನು ಹೋದರೆ ಹೋದೇನು" ಎ೦ಬ ಕನಕದಾಸರ ನುಡಿ
ಇದರ ಮರ್ಮ ಅರಿತು ಪರಮಮುಕ್ತಿಯೆಡೆಗೆ ನೀ ನಡಿ
Friday, June 13, 2008
Subscribe to:
Post Comments (Atom)
No comments:
Post a Comment