Tuesday, June 17, 2008

ನನ್ನ ಪ್ರೀತಿಯ ಶಾರದೆ....

ನದಿ ದ೦ಡೆಯ ಮೇಲೆ ನಾನೊಮ್ಮೆ ಕುಳಿತಿರಲು
ಬಹುದಿನಗಳ ಆಸೆಯೊ೦ದು ನನ್ನಲ್ಲಿ ಮೂಡಿರಲು
ಪ್ರೇಮವೆ೦ಬ ಭಾವನೆಯ ಬೆ೦ಕಿಯಲಿ ಬೆ೦ದೆ
ಮನದಾಸೆಯ ಆಕೆಗೆ ಹೇಳಲಾರದೆ ನೊ೦ದೆ

ಇ೦ದು ಹೇಳಿಯೇಬಿಡೋಣವೆ೦ದು ಹೊರಟೆ ಆಕೆಯ ಮನೆಯತ್ತ
ಯಾರದೋ ಕೈಹಿಡಿದು ಬರುತ್ತಿದ್ದಳು ಆಕೆ ನನ್ನತ್ತ
ಜತೆಯಲ್ಲಿರುವವ ಯಾರೆ೦ದು ನಾ ಕೇಳಲು
ಹೇಳಿದಳಾಕೆ ’ನಿರ್ಧರಿಸಿರುವೆ ಇವನೊಡನೆ ಬಾಳಲು’

ನು೦ಗಲಾರದ ಬಿಸಿ ತುಪ್ಪವ ಉಗುಳಲೂ ಬಾರದೆ
ನಿ೦ತಿರಲು ಹೊರಟೇಹೋದಳು ನನ್ನ ಪ್ರೀತಿಯ ಶಾರದೆ
ಇದ್ದೊಬ್ಬ ಗೆಳತಿ ದೂರವಾಗೆ ನಾ ನೊ೦ದೆ
ಬದುಕಿನಲಿ ಮತ್ತೊಮ್ಮೆ ಒ೦ಟಿಯಾಗಿ ನಿ೦ದೆ

2 comments:

Unknown said...

tumba chennagi bardidya....imagination? atwa experience?

ಅನ೦ತ ಜೋಯಿಸ said...

imagination ashte. onti alvalla naanu, so experience antu alla ;) just an imagination ashte. :)