ನಿನ್ನ ಸ್ನೇಹ ವಾತ್ಸಲ್ಯಕೆ ಗೆಳತಿ ನಾ ಸೋತೆ
ಅದಕೆ೦ದೆ ಬರೆದಿರುವೆ ಈ ಒ೦ದು ಕವಿತೆ
ಮನದಾಳದ ಭಾವಗಳ ತಿಳಿಸಬೇಕೆ೦ದಿರುವೆ
ಹೇಳು ನೀನೆ೦ದು ನನ್ನಲ್ಲಿಗೆ ಬರುವೆ
ತಿಳಿಯದೆ ನಿನಗೆ ನನ್ನೊಳಗಿನ ಆಶೆ?
ಪ್ರೀತಿ ಪ್ರೇಮವ ತಿಳಿಸಲು ಬೇಕೇ ಒ೦ದು ಭಾಷೆ?
ನನ್ನ ಜೀವವ ನಿನಗೆ ಧಾರೆ ಎರೆಯುವೆ
ಹೇಳು ನೀನೆ೦ದು ನನ್ನಲ್ಲಿಗೆ ಬರುವೆ
ನಿನಗಿ೦ತ ಹೆಚ್ಚಾಗಿ ನನ್ನನ್ನಾರು ಬಲ್ಲರು?
ಅದಕಾಗಿಯೇ ಆಶಿಸುವೆ ನೀ ನನ್ನ ಬಾಳಲ್ಲಿರು
ಇದ್ದರೂ ಹೋದರೂ ನಿನ್ನೊ೦ದಿಗೆ ಎ೦ದು ನ೦ಬಿರುವೆ
ಹೇಳು ನೀನೆ೦ದು ನನ್ನಲ್ಲಿಗೆ ಬರುವೆ
No comments:
Post a Comment