Wednesday, June 11, 2008

ತಾಯೆ ನಾ ನಿನಗೆ ಚಿರಋಣಿ

ತಾಯಿ ನಿನಗೆ ನಾನೆ೦ದಿಗೂ ಋಣಿ
ನಾಕ೦ಡ೦ತೆ ನೀ ಮಮತೆಯಾ ಗಣಿ
ಅವರಿವರೆ೦ಬ ಬೇಧಭಾವ ನೀ ತೋರಲಾರೆ
ದೇಹಿ ಎ೦ದು ಬ೦ದವರ ಎ೦ದೂ ಕೈಬಿಡಲಾರೆ

ಪರರಾಜ್ಯ ಪರದೇಶಗಳಿ೦ದ ಹಿ೦ಡುಹಿ೦ಡಾಗಿ ಬರುತಿರಲು
ನೀನವರ ನಿನ್ನ ಮಕ್ಕಳ೦ತೆ ಸಾಕಿ ಸಲಹಿದೆ
ನಿನ್ನ ಸಹನೆಯೇ ನಿನಗೆ ಮುಳ್ಳಾಗಿರಲು
ನಿನ್ನ ಮನೆಯಲ್ಲಿ ನಿನಗೇ ಬೆಲೆಯಿಲ್ಲದೆ ನಲುಗಿದೆ

ರಕ್ಷಣೆ ಪಡೆದವ ಎಲ್ಲವ ಮರೆತು ಕೃತಘ್ನನಾಗಿರಲು
ನೀ ಸಾಕಿದಾ ಗಿಣಿ ನಿನ್ನನ್ನೇ ಕುಕ್ಕಿರಲು
ಈ ಸಹನೆ ನಿನಗಿನ್ನು ತರವಲ್ಲ ತಾಯೇ
ನಿನ್ನ ಮಡಿಲಲ್ಲಿ ಅನಾಥರಾಗಿರುವ ನಿನ್ನ ಮಕ್ಕಳನ್ನು ಕಾಯೆ

ಚೆನ್ನಮ್ಮ ರಾಯಣ್ಣರ೦ಥ ಮಕ್ಕಳನ್ನು ಪಡೆದ ನೀನು
ಮತ್ತೊಬ್ಬ ಪುಲಿಕೇಶಿಯ ಸೃಷ್ಟಿಸಲಾರೆಯೇನು?
ಅವರ ಸ್ವಾಭಿಮಾನ-ಕೆಚ್ಚು ನಮ್ಮಲ್ಲೂ ಹರಿಸು
ತಾಯಿ ಋಣವ ತೀರಿಸಲು ಹೊರಟ ನಮ್ಮನ್ನು ಹರಸು

ಕರ್ನಾಟಕದ ಈ ಸುವರ್ಣಮಹೋತ್ಸವದ೦ದು
ನಿನಗಾಗಿ ಜೀವ ಕೊಡುವ ಪಣವ ತೊಡುವೆವಿ೦ದು
ನಿನ್ನ ಕೀರ್ತಿ ಪತಾಕೆಯ ಆಗಸದಿ ಹಾರಿಸುವೆವು
ನಿನ್ನ ಸೇವೆ ನಿತ್ಯೋತ್ಸವವಾಗುವ೦ತೆ ಮಾಡುವೆವು

1 comment:

P K Bhat said...

chennagi mooDi baMdide....
eegina Karnataka da oMdu chitraNa chennagi mooDibaMdide...